ಕಳೆದ ವರ್ಷ ಭಾರತದಲ್ಲಿಯೂ ಮೀಟೂ ಎಂದು ದೊಡ್ಡ ಸಂಚಲನವೊಂದು ಸೃಷ್ಟಿಯಾಗಿತ್ತು…

ಅದರಲ್ಲೂ ನಮ್ಮ ಸ್ಯಾಂಡಲ್ವುಡ್ ನಲ್ಲಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿದ್ದು ದೊಡ್ಡ ಮಟ್ಟದ ಸುದ್ದಿಯಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು..

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದ ಶೃತಿ ಹರಿಹರನ್ ಅವರು ಆ ಸಮಯದಲ್ಲಿ ಮೀಟೂ ಬಗ್ಗೆಯೇ ಒಂದು ಟ್ವೀಟ್ ಮಾಡಿ ಸುಮ್ಮನಾಗಿಬಿಟ್ಟರು.. ಅದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಏನೂ ಅಪ್ಡೇಟ್ ಮಾಡದೆ ಮೌನ ವಹಿಸಿದ್ದರು..

ಇದೀಗ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಶೃತಿ ಅವರು ರೀಎಂಟ್ರಿ ಕೊಟ್ಟಿದ್ದಾರೆ.. ಹೌದು 25 ನವೆಂಬರ್ 2018 ರಲ್ಲಿ ಕೊನೆಯ ಬಾರಿ ಮೀಟೂ ಬಗ್ಗೆ ರೀಟ್ವೀಟ್ ಮಾಡಿದ್ದ ಶೃತಿ ಅವರು ನಿನ್ನೆ ಮತ್ತೆ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿದ್ದಾರೆ..

ಹೌದು ನಿನ್ನೆ ನಿಧನರಾದ ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಶೃತಿ ಅವರು ಸಾಮಾಜಿಕ ಜಾಲತಾಣಕ್ಕೆ ಮರಳಿ ಬಂದಿದ್ದಾರೆ..

“ಒಬ್ಬ ಲೆಜೆಂಡ್‍ರನ್ನು ಕಳೆದುಕೊಂಡ ನೋವನ್ನು ಹಂಚಿಕೊಳ್ಳಲು ಬಹಳ ಕಾಲದ ಬಳಿಕ ಸಾಮಾಜಿಕ ಜಾಲತಾಣಕ್ಕೆ ಬರುತ್ತಿದ್ದೇನೆ. ಇಂತಹ ಅದ್ಭುತ ವ್ಯಕ್ತಿಯ ಜೊತೆಗೆ ಕೆಲಸ ಮಾಡುವ ಅವಕಾಶ ಒಮ್ಮೆ ನನಗೆ ಸಿಕ್ಕಿತ್ತು. ಅವರ ಸರಳತೆ ಹಾಗೂ ಜ್ಞಾನ ವಿಸ್ಮಯವಾದದ್ದು, ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ..

ಗಿರೀಶ್ ಕಾರ್ನಾಡ್ ಅವರೊಟ್ಟಿಗೆ ಶೃತಿ ಅವರಿಗೆ ಸವಾರಿ 2 ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು, ಅದನ್ನೂ ಕೂಡ ನೆನೆದು ನೆನಪುಗಳನ್ನು ಹಂಚಿಕೊಂಡಿದ್ದಾರೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ