ಸುಧಾಮ್ಮ ಎಂದೊಡನೆ ಅಮ್ಮನೇ ಎನಿಸುತ್ತದೆ ನಿಜ.. ಅವರು ಇದುವರೆಗು ಮಾಡಿರುವ ಸೇವೆಗಳನ್ನು ಲೆಕ್ಕ ಇಟ್ಟರೆ ಅದರಂತಹ ದೊಡ್ಡ ಪಾಪ ಮತ್ತೊಂದಿಲ್ಲ.. ದೇವರು ಮಾಡುವ ಕೆಲಸಕ್ಕೆ ಲೆಕ್ಕ ಇಟ್ಟು ನಾನ್ಯಾವ ನರಕ್ಕೋಗಲಿ ಅಲ್ಲವಾ… ಆದರೂ ಕೂಡ ಸುಧಾಮ್ಮ ಅವರು ಈ ರೀತಿ ಕಷ್ಟದಲ್ಲಿರುವವರಿಗೆ ನೆರವಾದಗ ಅದನ್ನು ಮಾಧ್ಯಮದವರ ಮುಂದೆ ಏಕೆ ಹೇಳಿಕೊಳ್ತಾರೆ?? ಪ್ರಚಾರಕ್ಕಾಗಿಯೇ?? ಖಂಡಿತಾ ಇಲ್ಲ.. ಇದರ ಹಿಂದೆ ಬೇರೆಯದ್ದೇ ಸತ್ಯವಿದೆ.. ಅದು ಕೊನೆಯಲ್ಲಿದೆ.. ಅದಕ್ಕೂ ಮುನ್ನ ಸುಧಾಮ್ಮನ ಕುರಿತ ಈ ನಾಲ್ಕು ಸಾಲುಗಳನ್ನೊಮ್ಮೆ ಓದಿಬಿಡಿ.. -ರಮ್ಯ ಜಗತ್..

ಹೆತ್ತವಳಲ್ಲ ನೀ.. ಹೊತ್ತವಳಲ್ಲ ನೀ.. ಆದರೂ ಮಿಡಿಯುತ್ತದೆ ನಿನ್ನೀ ಮನವೇಕೆ ತಾಯಿ??

ಬಂಧುಗಳಲ್ಲ ಅವರು ನಿನಗೆ.. ಬಳಗವಲ್ಲ ನಿನ್ನ ಮನೆಯವರಿಗೆ.. ಆದರೂ ನೀ ನಿಲ್ಲುವೆ ಅವರೊಂದಿಗೆ ಏಕೆ ತಾಯಿ??

ಕರುನಾಡು ಕಂಡ ಈ ಯುಗದ ಧೃವತಾರೆ ನೀ.. ಮೋಡ ಕವಿದಿರಲಿ ಮಳೆಯೇ ಬರುತಿರಲಿ ಕುಂದುವುದಿಲ್ಲ ನಿನ್ನ ಪ್ರಕಾಶತೆ ಏಕೆಂದರೆ ನೀ ಬರೀ ಅಮ್ಮನಲ್ಲ.. ಮಹಾತಾಯಿ..

ಕೊಡಗಿನಲ್ಲಿ ನೆರೆ ಬಂದಾಗ ಸೂರಿಗೆ ನೆರವಾದೆ..
ಹತ್ತಾರು ಹುತಾತ್ಮ ಸೈನಿಕರಿಗೆ ಲಕ್ಷ ಲಕ್ಷಗಳ ನೀಡಿದೆ..
ದೇವದಾಸಿಯರ ತಿದ್ದೀ ತೀಡಿ ಸರಿ ದಾರಿಯ ತೋರಿಸಿದೆ..
ಯಾರೋ ಹೆತ್ತವರು ನಿನ್ನನು.. ನಮಗೆಲ್ಲಾ ಹೆತ್ತವಳಂತೆ ನೀನು..

ಉಳ್ಳವರು ಶಿವಾಲಯವ ಕಟ್ಟುವರು ಎನ್ನುವ ಮಾತಿದೆ.. ಆದರೆ ನೀ ಕಷ್ಟದಲ್ಲಿ ಇರುವವರನ್ನೇ ಶಿವನೆಂದು ಭಾವಿಸಿದೆ.. ಲಕ್ಷ ಜನರಿಗೆ ಶಿವಾಲಯವ ಕಟ್ಟುವಂತೆ ಸ್ಪೂರ್ತಿಯಾದೆ..

ಬಣ್ಣಿಸಲಾಗದು ತಾಯಿ ನಾ ನಿನ್ನ.. ಸಣ್ಣವಳು ನಾನು ಕಲಿಯಬೇಕಿದೆ ಬಹಳಷ್ಟು ಇನ್ನ..

ನೀ ಕೊಡುವ ರೂಪಾಯಿಯೂ ಕಷ್ಟದಲ್ಲಿರುವವರಿಗೆ ಕೋಟಿ ರೂಪಾಯಿಯಂತೆ..
ಆ ರೂಪಾಯಿಯ ಬೆಲೆ ಬಡವನಿಗೆ ಮಾತ್ರ ಗೊತ್ತಂತೆ..

ಆ ದೇವರೇ ಕಳುಹಿಸಿರಬೇಕು ಅಮ್ಮಾ ನಿಮ್ಮನು.. ನೀವೂ ಕೂಡ ಕರುನಾಡಿನ ದೇವತೆಯಂತೆ ಹೆಚ್ಚೇನು ಹೇಳೆನು..

ಹ.. ಇನ್ನು ಸುಧಾಮ್ಮ ಅವರು ತಾವು ನೀಡುವ ನೆರವಿನ ಬಗ್ಗೆ ಮಾಧ್ಯಮಗಳ ಮುಂದೆ ಏಕೆ ಹೇಳಿಕೊಳ್ತಾರೆ.. ಇದಕ್ಕೆ ಸುಧಾಮ್ಮನೇ ನಗುಮುಖದಿಂದ ನೀಡುವ ಉತ್ತರ ಇಲ್ಲಿದೆ ನೋಡಿ..

“ರಾಷ್ಟ್ರಕ್ಕಾಗಿ ಬಲಿದಾನವಾದವರ ಹಿಂದೆ ನಾವು ಸದಾ ಇರುತ್ತೇವೆ… ನನಗೆ ದುಡ್ಡನ್ನು ಕೊಟ್ಟೆ ಎಂಬ ಪ್ರಚಾರ ಬೇಕಿಲ್ಲ.. ಆದರೆ ನಾವು ಕೊಡುವುದನ್ನು ನೋಡಿ.. ಇನ್ನಷ್ಟು ಜನರು ನೆರವು ನೀಡಲು ಮುಂದೆ ಬರುತ್ತಾರೆ.. ಬೇರೆಯವರು ಕೂಡ ಸಹಾಯ ಹಸ್ತ ಚಾಚುತ್ತಾರೆ.. ಅದು ಸಾಕು ನನಗೆ”

ಎಂದು ಹೇಳುವಾಗ ಆ ತಾಯಿಯ ಕಣ್ಣಿನಲ್ಲಿ ಏನೋ ಸಾಧಿಸಿದ ಹೊಳಪು ಕಂಡಿದ್ದಂತೂ ಸುಳ್ಳಲ್ಲ.. ಆ ತಾಯಿ ನಿಜಕ್ಕೂ ಅನೇಕರಿಗೆ ಸ್ಪೂರ್ತಿ.. ಅವರನ್ನು ನೋಡಿ ಅನೇಕ ಶ್ರೀಮಂತರು ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.. ಮುಂದೆಯೂ ನೆರವಾಗುತ್ತಲೂ ಇರುತ್ತಾರೆ..

ನೂರ್ಕಾಲ ಸುಖವಾಗಿರಿ ಅಮ್ಮಾ.. ಇದು ಬರಿ ಮಾತಲ್ಲ.. ಕೋಟಿ ಕೋಟಿ ಕನ್ನಡಿಗರ ಮನಸ್ಪೂರ್ತಿಯ ಹಾರೈಕೆ…….

Leave comment

Your email address will not be published. Required fields are marked with *.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ