ಸುಧಾ ಮೂರ್ತಿ ಎಂದಾಕ್ಷಣ ಮನಸ್ಸಿನಲ್ಲಿ ಗೌರವ ಪ್ರೀತಿ ವಾತ್ಸಲ್ಯ ಎಲ್ಲಾ ಮೂಡೋದು ಸಾಮಾನ್ಯ.. ಅದಕ್ಕೂ ಮೀರಿ ಈ ಮಹಾತಾಯಿಯನ್ನ ನೋಡಿದ್ರೆ ಮನಸ್ಸಿಗೆ ನವ ಚೈತನ್ಯ ತುಂಬಿ ಜೀವನದಲ್ಲಿ ಏನನ್ನಾದರು ಸಾಧಿಸಬೇಕು ಅನ್ಸತ್ತೆ..

ಇದಕ್ಕೆ ಕಾರಣ ಸುಧಾಮ್ಮನ ಮಾತು.. ಹೌದು ಸುಧಾ ಮೂರ್ತಿ ಅವರ ಮಾತುಗಳು ಎಷ್ಟೋ ಜನರ ಜೀವನವನ್ನು ಬದಲಾಯಿಸಿದೆ.. ಅಂತಹವರಲ್ಲಿ ನಾನೂ ಕೂಡ ಒಬ್ಬಳು.. ಅವರ ಮಾತುಗಳೇ ನನಗೆ ಪ್ರೇರಣೆ.. ನನ್ನ ಜೀವನ ಕೂಡ ಮದಲಾದದ್ದು ಈ ಮಹಾತಾಯಿಯ ಮಾತುಗಳಿಂದಲೇ..

ಇವರು ಆರ್ಥಿಕವಾಗಿ ಈಗಾಗಲೇ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ.. ಆದರೆ ಬಹುಶಃ ಅವರಿಗೆ ಗೊತ್ತಿರೋದಿಲ್ಲ.. ಅವರ ಮಾತು ಎಷ್ಟು ಜನರರ ಏಳಿಗೆಗೆ ಸಹಾಯ ಆಗಿದೆ ಅಂತ..

ಎಷ್ಟೇ ಶ್ರೀಮಂತೆಯಾದರೂ ಸರಳವಾಗಿ ನಮ್ಮ ಅಮ್ಮನೇ ಏನೋ ಎಂಬಂತೇಯೇ ಎಲ್ಲರಿಗೂ ಭಾಸವಾಗ್ತಾರೆ.. ಅವರ ಮಾತುಗಳೋ ಅದನ್ನು ಹೇಳೋಕೆ ನಾನು ಸಣ್ಣವಳು ಬಿಡಿ..

ಆದರೂ ಹೇಳ್ತೀನಿ.. ಬೇಕಾದಷ್ಟು ಸಾರಿ ಅವರ ಮಾತುಗಳು ತುಂಬಾ ಜನಗಳಿಗೆ ಸ್ಪೂರ್ತಿ ನೀಡಿದೆ.. ಅದೇ ರೀತಿ ಮೊನ್ನೆ ಮೊನ್ನೆಯಷ್ಟೇ ಜೀ ಕನ್ನಡ ಚಾನಲ್ ನ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮ ನಡೆದಿದೆ.. ಆ ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಹೆಮ್ಮೆಯ ಸ್ಪೂರ್ತಿ ಎಂದು ಸುಧಾಮ್ಮ ಅವರನ್ನು ಗೌರವಿಸಿದರು..

ಆ ಸಮಯದಲ್ಲಿ ಸುಧಾಮ್ಮನ ಎರಡು ಫೋಟೋಗಳನ್ನ ತೋರಿಸಿದ್ರು.. ಅದರಲ್ಲಿ ಒಂದು ತಿರುಪತಿಯಲ್ಲಿ ಹೂವಿನ ಬ್ಲಾಕ್ ಅಂತ ಇರತ್ತೆ ದೇವರಿಗೆ ಹೂ ರೆಡಿ ಆಗೋ ಅಂತಹ ಜಾಗ.. ಆ ಜಾಗದಲ್ಲಿ ನಿಜಕ್ಕೂ ಹೇಳ್ತೀನಿ ಅಕ್ಷರಶಃ ಜನಸಾಮಾನ್ಯರಂತೆ ಕೂತು ಹೂ ಕಟ್ಟುತ್ತಾರೆ.. ಯಾವುದೇ ಹಮ್ಮುಬಿಮ್ಮು ಇಲ್ಲದೆ ನಾನೊಬ್ಬ ಹೂ ಕಟ್ಟೋ ಹೆಂಗಸು.. ದೇವರಿಗೆ ನನ್ನ ಸೇವೆ ಸಲ್ಲಲಿ ಅನ್ನೋ ರೀತಿಯಲ್ಲಿ ಕೆಲಸ ಮಾಡ್ತಾರೆ..

ಇನ್ನೊಂದು ಫೋಟೋ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತರಕಾರಿ ಕಟ್ ಮಾಡ್ತಾ ಇರೋ ಅಂತದ್ದು.. ಅದರಲ್ಲೂ ಕೂಡ ಜನಸಾಮಾನ್ಯರಂತೆ ತರಕಾರಿಯನ್ನು ಕಟ್ ಮಾಡ್ತಿರ್ತಾರೆ..

ಈ ಬಗ್ಗೆ ಸುಧಾಮ್ಮ ಹೇಳೋದೆ ಬೇರೆ.. ಹೌದು ಈ ಕುರಿತು ಅವರಿಗೆ ಪ್ರಶ್ನೆ ಕೇಳಿದಾಗ ಅವರು ಹೇಳಿದ ಮಾತೇನು ಗೊತ್ತಾ??

“ಮನುಷ್ಯನಿಗೆ ಹಣ ಬಂದಾಗ ಸಾಮಾನ್ಯವಾಗಿ ಮದ ಬಂದುಬಿಡತ್ತೆ.. ಅದಕ್ಕೆ ನಾನು ಅಂತದ್ದೇನು ಬರಬಾರದು ಅಂತ.. ರಾಯರ ಮಠದಲ್ಲಿ ಪ್ರತಿ ವರ್ಷ ಹೋಗಿ ಮೂರು ದಿನ ಈ ರೀತಿ ಕೆಲಸ ಮಾಡಿ ಬರ್ತೀನಿ” ಅಂತಾರೆ ಈ ಮಹಾತಾಯಿ..

ಮನುಷ್ಯನಿಗೆ ಹಣ ಬರಬೇಕು.. ದೊಡ್ಡ ಮಟ್ಟಕ್ಕೆ ಏರಬೇಕು..ಆದರೆ ಆ ಹಣದ ಜೊತೆಗೆ ಅಹಂಕಾರ ಎಂದೂ ಬರಬಾರದು.. ಆಗ ಆತ ಇನ್ನೂ ಎತ್ತರಕ್ಕೆ ಬೆಳಿತಾನೆ.. ಅವನ ಸಾಧನೆ ಆಕಶಕ್ಕೇರತ್ತೆ ಅಂತಾರೆ ಸುಧಾಮ್ಮ..

ನಿಜಕ್ಕೂ ಸುಧಾಮ್ಮರ ಮಾತು ನಮ್ಮ ಸಾಧನೆಯ ಹಾದಿಗೆ ಒಂದು ಮೆಟ್ಟಿಲು ಎಂದೇ ಹೇಳಬಹುದು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ