ಸರಳ ವ್ಯಕ್ತಿತ್ವದ ಸಜ್ಜನಿಕೆ ಸಾಕಾರಾ ಮೂರ್ತಿ.. ಸುಧಾ ಮೂರ್ತಿ ಅವರ ಬಗ್ಗೆ ಹೇಳಲು ಪದಗಳು ಸಾಲದು..

ಹೌದು ನಮ್ಮ ನಾಡು ಕಂಡ ಆಧುನಿಕ ತ್ಯಾಗಮೂರ್ತಿ ಎನ್ನಬೇಕು ಅಷ್ಟೇ‌.
ಇವರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ.. ಅಂತಹದೊಂದು ಘಟನೆ ಇಲ್ಲಿದೆ ನೋಡಿ..

ಹೀಗೆ ಒಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಅಲ್ಲಿದ್ದ ಮಹನೀಯರೊಬ್ಬರು ಸುಧಾ ಮೂರ್ತಿ ಅವರನ್ನು ನೀವ್ಯಾಕೆ ನಿಮ್ಮ ಆತ್ಮ ಕಥನವನ್ನು ಬರೆಯಬಾರದು.. ನೀವು ಹೇಘಿದ್ದರೂ ಲೇಖಕಿ.. ನಿಮ್ಮ ಆತ್ಮ ಕಥೆಯನ್ನು ಬರೆದರೆ ಚೆನ್ನಾಗಿ ಇರುತ್ತದೆ ಎಂದರು..

ಅದಕ್ಕೆ ಸುಧಾ ಮೂರ್ತಿ ಅವರು ನೀಡಿದ ಉತ್ತರವೇನು ಗೊತ್ತ?? ಸರಳತೆಗೆ ಹಿಡಿದ ಕೈಗನ್ನಡಿ ಈ ಮಹಾತಾಯಿ..

ಬರವಣಿಗೆಯನ್ನು ನಾನು ಆಯ್ದುಕೊಳ್ಳಲಿಲ್ಲ.. ಬರವಣಿಗೆಯೇ ನನ್ನನ್ನ ಆರಿಸಿಕೊಂಡಿತು.. ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಬರವಣಿಗೆಯನ್ನು ಬಳಸುತ್ತೇನೆ.. ನಾನು ಎಂದೂ ಬರಹಗಾರ್ತಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ..‌ ಒಂದು ಕಾದಂಬರಿ ಬರೆಯಲು ಎರಡು ವರ್ಷ ಬೇಕು ನನಗೆ.. ನನಗೆ ಮೊದಲು ಪಾತ್ರಗಳು ಒಳಗೆ ಮೂಡುತ್ತವೆ.. ಆನಂತರವಷ್ಟೇ ಬರೆಯಲು ಆರಂಭಿಸುತ್ತೇನೆ.. ಓದುಗರಿಗೆ ನಾವೆಂದೂ ವಂಚನೆ ಮಾಡಬಾರದು.. ಓದುಗರಿಗೆ ಲೇಖಕರು ನಿಷ್ಠೆಯಿಂದ ಇರಬೇಕು.. ಓದಿಗರಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಬರೆಯಬೇಕು..

ಬರವಣಿಗ್ರ್ ನಮ್ಮ ಒಳಗೆ ಹೊಸ ಉತ್ಸಾಹಕ್ಕೆ ದಾರಿ ಮಾಡುತ್ತದೆ.. ನಾನು ಯಾವುದೇ ಕೃತಿ ಬರೆದರೂ ಅದನ್ನು ಖುಷಿಯಿಂದ ಬರೆಯುತ್ತೇನೆ.. ಯಾರೇ ಕೃತಿಗಳನ್ನು ಬರೆದರೂ ಮೊದಲು ಅದರ ಬಗ್ಗೆ ಅಧ್ಯಯನ ನಡೆಸಿ ಸಂಶೋಧನೆ ನಡೆಸಿ ನಂತರ ಬರೆಯಬೇಕು..‌ ವ್ಯಾಸರು ಮತ್ತು ವಾಲ್ಮೀಕಿ ಕೊಟ್ಟ ರೂಪುರೇಷೆ ಗಳಂತೆ ನಾನು ಸರಳವಾಗಿ ಪುಸ್ತಕ ಬರೆಯುತ್ತೇನೆ.. ಅದರಲ್ಲೂ ಮಕ್ಕಳಿಗಾಗಿ ಪುಸ್ತಕ ಬರೆಯುವಾಗ.. ಮಕ್ಕಳಿಗೆ ಉತ್ತಮ ವಿಚಾರಗಳನ್ನು ಹೇಳಲು ಪ್ರಾಮುಖ್ಯತೆ ನೀಡುತ್ತೇನೆ.. ಮಕ್ಕಳಿಗೆ ಕಪಟತನದ ಪರಿಚಯ ಮಾಡಬಾರದು..

ಬಹುತೇಕರು ಅಕ್ರಮ ಹಣ ಮಾಡಲು ತಪ್ಪು ದಾರಿ ಹಿಡಿಯುತ್ತಾರೆ. ಅವರಿಗೆ ಎಂತಹ ಗತಿ ಬರುತ್ತದೆ ಎಂದು ನಾವು ಪ್ರತಿದಿನ ನೋಡುತ್ತಿರುತ್ತೇವೆ.. ಆ ರೀತಿಯ ಆಡಂಬರದ ಜೀವನ ಬೇಡ..

ನನ್ನದು ಸರಳ ಜೀವನ.. ಆತ್ಮ ಕತೆ ಬರೆಯುವಷ್ಟು ದೊಡ್ಡವಳಲ್ಲ.. ನನ್ನದು ಸಾಮಾನ್ಯ ವ್ಯಕ್ತಿತ್ವ.. ಸರಳ ವ್ಯಕ್ತಿತ್ವ.. ನನಗೇಕೆ ಆತ್ಮ ಕತೆ?? ಇರುವಷ್ಟು ದಿನ ಸರಳವಾದ .. ನೆಮ್ಮದಿಯ ಪ್ರಾಮಾಣಿಕತೆಯ ಜೀವನ ನಡೆಸಬೇಕು ಅಷ್ಟೇ.. ದುಡಿದಿದ್ದರಲ್ಲಿ ಒಂದಷ್ಟು ಬೇರೆಯವರಿಗೂ ದಾನ ಮಾಡಬೇಕು.. ಜೀವನದಲ್ಲಿ ಮೌಲ್ಯಗಳಿರಬೇಕು ಎಂದರು..

ನಿಜಕ್ಕೂ ನೀವು ನಮ್ಮ ನಾಡಿನ ಮಹಾತಾಯಿಯೇ ಹೌದು..

Leave comment

Your email address will not be published. Required fields are marked with *.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ