ಇತ್ತೀಚೆಗೆ ನಾನು ರಷ್ಯಾದ ಮಾಸ್ಕೋಗೆ ಹೋಗಿದ್ದಾಗ, ಭಾನುವಾರದಂದು ಹತ್ತಿರದ ಪಾರ್ಕ್‌ವೊಂದಕ್ಕೆ ತೆರಳಿದ್ದೆ. ತಣ್ಣನೆಯ ಗಾಳಿ ಚುಮುಕಿಸುವ ವಾತಾವರಣ, ಆದರೂ ಅದು ಬೇಸಿಗೆ ಆದ ಕಾರಣ ನಾನು ಕೊಡೆಯ ನೆರಳಲ್ಲಿ ಅಲ್ಲಿನ ಸೌಂಧರ್ಯವನ್ನು ಸವಿಯುತ್ತ ನಿಂತಿದ್ದೆ. ಇದ್ದಕಿಂದ್ದಂತೆ ನನ್ನ ದೃಷ್ಟಿ ಅಲ್ಲಿಯೇ ಇದ್ದ ಒಂದು ಯುವ ಜೋಡಿಯ ಮೇಲೆ ಬಿತ್ತು. ಅವರನ್ನು ನೋಡಿದರೆ ಹೊಸದಾಗಿ ಮದುವೆಯಾದಂತೆ ಕಾಣುತ್ತಿದ್ದರು. ಆ ಹುಡುಗಿ ೨೦ರ ಆಸುಪಾಸಿನ ವಯಸ್ಸಿನಂತೆ ಕಾಣುತ್ತಿದ್ದಳು. ತೆಳ್ಳಗೆ, ಹೊಂಬಣ್ಣದ ಕೂದಲು, ನೀಲಿ ಕಣ್ಣುಗಳುಳ್ಳ ಆಕೆ ಬಹಳ ಸುಂದರವಾಗಿದ್ದಳು. ಆತನು ಬಹುತೇಕ ಅಷ್ಟೇ ವಯಸ್ಸಿನವನಂತಿದ್ದು, ಬಹಳ ರೂಪವಂತನಾಗಿದ್ದ. ಆತ ಸೈನ್ಯದ ಸಮವಸ್ತ್ರದಲ್ಲಿದ್ದ. ಮಧು ಮಗಳು ಮುತ್ತು ಹಾಗೂ ಲೇಸ್ ಗಳಿಂದ ಅಲಂಕೃತಗೊಂಡಿದ್ದ ಬಿಳಿ ಬಣ್ಣದ ಸಾಟಿನ್ ಉಡುಗೆಯಲ್ಲಿದ್ದಳು.

ವಧುವಿನ ಗೆಳತಿಯರಿಬ್ಬರು ವಧುವಿನ ಹಿಂದೆ ನಿಂತು ಆಕೆ ತೊಟ್ಟಿದ್ದ ಗೌನ್‌ನ ತುದಿಯನ್ನು ಹಿಡಿದು ಅದು ಕೊಳೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆ ಜೋಡಿ ಮಬ್ಬಾಗಬಾರದೆದು ಒಬ್ಬ ಯುವಕ ಒಂದು ಕೊಡೆಯನ್ನು ಅವರಿಗೆ ಹಿಡಿದು ನಿಂತಿದ್ದನು.
ಮಧು ಮಗಳು ಒಂದು ಹೂವಿನ ಗುಚ್ಛವನ್ನು ಹಿಡಿದು ಒಬ್ಬರನೊಬ್ಬರ ಕೈಗಳು ಹಿಡಿದಂತೆ ನಿಂತಿದ್ದರು. ನೋಡಲು ಅದೊಂದು ಸುಂದರ ದೃಷ್ಯ. ನನಗೆ ಆಶ್ಚರ್ಯವಾಗಿದ್ದು ಈ ಜೋಡಿ ಮದುವೆಯಾಗಿ ಈ ಮಳೆಯಲ್ಲಿ ಈ ಪಾರ್ಕಿಗೆ ಏಕೆ ಬಂದಿದ್ದಾರೆಂಬುದು. ನಾನು ನೋಡುತ್ತಿದ್ದಂತೆ ಅವರು ಅಲ್ಲಿದ್ದ ಸ್ಮಾರಕದ ವೇದಿಕೆಯ ಬಳಿ ನಡೆದು ಹೋದರು. ಹೂವಿನ ಗುಚ್ಛವನ್ನು ಸ್ಮಾರಕದ ಮೇಲಿಟ್ಟು ಇಬ್ಬರೂ ತಲೆ ಬಾಗಿ ನಮಸ್ಕರಿಸಿ ನಿಧಾನವಾಗಿ ನಡೆದು ಹಿಂದೆ ಬಂದರು.

ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಇನ್ನಷ್ಟು ಕುತೂಹಲವಾಯಿತು. ಅವರ ಜೊತೆಯಲ್ಲಿಯೇ ಹಿರಿಯ ವ್ಯಕ್ತಿಯೊಬ್ಬರು ನಿಂತಿದ್ದರು. ಅವರು ನನ್ನ ಕಡೆ ನೋಡಿ, ನಾನು ಸೀರೆ ತೊಟ್ಟು ನಿಂತಿದ್ದನ್ನು ನೋಡಿ, ನೀವು ಭಾರತೀಯರ ಎಂದು ಕೇಳಿದರು.
ಹೌದು ನಾನು ಭಾರತೀಯಳು ಎಂದು ಉತ್ತರಿಸಿದೆ. sಸ್ನೇಹಪರವಾಗಿ ನಾವು ಮಾತನಾಡಲು ಶುರು ಮಾಡಿದೆವು. ಈ ಅವಕಾಶವನ್ನು ಬಳಸಿಕೊಂಡು ನಾನು ಒಂದಿಷ್ಟು ಪ್ರಶ್ನೆಗಳನ್ನು ಕೇಳಬೇಕೆಂದುಕೊಂಡೆ.
ನಿಮಗೇಗೆ ಇಂಗ್ಲೀಷ್ ಬರುತ್ತದೆ? ಓ, ನಾನು ವಿದೇಶದಲ್ಲಿ ಕೆಲಸ ಮಾಡಿರುವೆ.
ದಯಮಾಡಿ ತಿಳಿಸಿ, ಮದುವೆಯ ದಿನ ಆ ಯುವ ಜೋಡಿ ಏಕೆ ಯುದ್ದ ಸ್ಮಾರಕಕ್ಕೆ ಬಂದಿದ್ದಾರೆ.
ಓ, ಅದು ಇಲ್ಲಿನ ಪದ್ಧತಿ. ಸಾಮಾನ್ಯವಾಗಿ ಇಲ್ಲಿ ಮದುವೆಗಳು ಯಾವುದೇ ತಿಂಗಳಲ್ಲಿ ಜರುಗಿದರೂ ಶನಿವಾರ ಅಥವಾ ಭಾನುವಾರಗಳಂದೇ ಜರುಗುತ್ತವೆ. ರಿಜಿಸ್ಡರ್ ಆಫೀಸಿನಲ್ಲಿ ಸಹಿ ಮಾಡಿದ ನಂತರ ಮದುವೆಯಾದ ಜೋಡಿ ಅತಿಮುಖ್ಯವಾಗಿ ಹತ್ತಿರದ ಯುದ್ಧಸ್ಮಾರಕಗಳಿಗೆ ಭೇಟಿ ನೀಡಬೇಕು. ರಷ್ಯಾದ ಪ್ರತಿಯೊಬ್ಬ ಯುವಕನೂ ಸೈನ್ಯದಲ್ಲಿ ಕೆಲ ವರ್ಷಗಳಾದರೂ ಕೆಲಸ ಮಾಡಲೇಬೇಕು. ಆತ ಯಾವುದೇ ಸ್ಥಾನದಲ್ಲಿದ್ದರೂ ಕೂಡ ಮದುವೆಯ ದಿನ ಆತ ಸೇನಾ ಸಮವಸ್ತ್ರವನ್ನೇ ತೊಡಬೇಕು.


ಹಾಗೇಕೆ?
ಇದು ಕೃತಜ್ಞತೆಯ ಸಂಕೇತ. ನಮ್ಮ ಪೂರ್ವಜರು ರಷ್ಯಾದಲ್ಲಿ ನಡೆದ ಬೇರೆ ಬೇರೆ ಯುದ್ಧಗಳಲ್ಲಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಣೆ ಮಾಡಿದ್ದಾರೆ. ಕೆಲವೊಂದು ಯುದ್ಧಗಳನ್ನು ನಾವು ಗೆದ್ದಿದ್ದೇವೆ, ಕೆಲವೊಂದನ್ನು ಸೋತಿದ್ದೇವೆ. ಆದರೆ ಅವರ ತ್ಯಾಗ ಎಂದಿಗೂ ದೇಶಕ್ಕಾಗಿಯೇ ಇತ್ತು. ಈಗ ಸ್ವತಂತ್ರ್ಯ ರಷ್ಯಾದಲ್ಲಿ ಶಾಂತಿಯುತವಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಪೂರ್ವಜರ ತ್ಯಾಗವೇ ಕಾರಣ. ಅದಕ್ಕಾಗಿ ಹೊಸದಾಗಿ ಮದುವೆಯಾದ ಜೋಡಿ ಅವರನ್ನು ನೆನದು ಅವರ ಆಶೀರ್ವಾದ ಪಡೆಯಬೇಕು. ಇಲ್ಲಿ ಮದುವೆಯ ಸಂಭ್ರಮಾಚರಣೆಗಿಂತ ದೇಶದ ಮೇಲಿನ ಪ್ರೀತಿಯೇ ದೊಡ್ಡದು. ಇಲ್ಲಿನ ಹಿರಿಯರಾದ ನಾವುಗಳು ಈ ಸಂಪ್ರದಾಯವನ್ನು ಬಿಡದಂತೆ ಪಾಲಿಸಿಕೊಂಡು ಬರುತ್ತಿದ್ದೇವೆ. ಮಾಸ್ಕೋ ಆಗಲಿ, ಸೆ.ಪೀಟರ್ಸ್‌ಬರ್ಗ್ ಆಗಲಿ ಅಥವಾ ರಷ್ಯಾದ ಯಾವುದೇ ಇತರೆ ಜಾಗದಲ್ಲಾಗಲಿ ಮದುವೆಯ ದಿನ ತಪ್ಪದೆ ಹತ್ತಿರದ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲೇಬೇಕು.

ಇದು ನಾವು ನಮ್ಮ ಮಕ್ಕಳಿಗೆ ಏನು ಹೇಳಿಕೊಡುತ್ತಿದ್ದೇವೆ ಎಂದು ನನ್ನನ್ನು ಆಶ್ಚರ್ಯ ಚಕಿತಗೊಳ್ಳುವಂತೆ ಮಾಡಿತು. ಭಾರತೀಯರಾದ ನಮಗೆ ನಮ್ಮ ಜೀವನದ ಅತಿ ಮುಖ್ಯವಾದ ದಿನದಂದು ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರನ್ನು ನೆನೆಸಿಕೊಳ್ಳುವ ಕನಿಷ್ಟ ಸೌಜನ್ಯವಾದರೂ ಇದೆಯಾ? ನಾವುಗಳು ಸೀರೆಗಳನ್ನು, ಒಡವೆಗಳನ್ನು ಕೊಳ್ಳುವುದರಲ್ಲಿ, ಮದುವೆಗೆ ಯಾವ ಯಾವ ಅಡುಗೆ ಮಾಡಿಸಬೇಕು ಎಂಬುದರಲ್ಲಿ, ಡಿಸ್ಕೋಗಳಲ್ಲಿ ಪಾರ್ಟಿ ಮಾಡುವುದರಲ್ಲಿ ಬ್ಯುಸಿಯಾಗಿ(ತಲ್ಲೀನರಾಗಿ) ಬಿಟ್ಟಿರುತ್ತೇವೆ.
ಆ ಸಮಯದಲ್ಲಿ ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿತು. ಈ ವಿಷಯವಾಗಿ ನಾವುಗಳು ರಷ್ಯಾದಿಂದ ಪಾಠ ಕಲಿಯಬೇಕೆಂದು ಭಾವಿಸಿದೆ.

Leave comment

Your email address will not be published. Required fields are marked with *.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ