ವಿಶ್ವಕಪ್ 2019 ರ ಸೆಮಿಫೈನಲ್ಸ್ ನಲ್ಲಿ ನ್ಯೂಜಿಲೆಂಡ್ ವಿತುದ್ಧ ಸೋತು ಟೂರ್ನಿ ಇಂದ ಹೊರಬಂದ ಟೀಂ ಇಂಡಿಯಾ ಆಟಗಾರರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ವೊಂದನ್ನು ಕಳುಹಿಸಿದ್ದಾರೆ..

ಹೌದು ಕೋಟ್ಯಾಂತರ ಕೋಟಿ ಅಭಿಮಾನಿಗಳು ಭಾರತ ತಂಡದ ಮೇಲೆ ಅಪಾರ ನಂಬಿಕೆ ಇಟ್ಟು ವಿಶ್ವಕಪ್ ಫಿನಾಲೆ ತಲುಪುತ್ತಾರೆ ಎಂದೇ ಕಾದು ಕುಳಿತಿದ್ದರು.. ಆದರೆ ದುರಾದೃಷ್ಟವಶಾತ್ ಈ ಸಾಲಿನ ವಿಶ್ವಕಪ್ ಭಾರತೀಯರ ಕೈ ಸೇರಲಿಲ್ಲ..

ಮಳೆಯ ಕಾರಣ ಎರಡು ದಿನ ನಡೆದ ಸೆಮಿಫೈನಲ್ಸ್ ಮ್ಯಾಚ್ ಭಾರತದ ವಿಶ್ವಕಪ್ ಆಸೆಗೆ ತಣ್ಣೀರೆರೆಚಿಬಿಟ್ಟಿತು‌… ಸೋತ ನೋವಿನಲ್ಲಿದ್ದ ಭಾರತೀಯರಿಗೆ ವಿರಾಟ್ ಕೋಹ್ಲಿ ಅಭಿಮಾನಿಗಳಿಗೆ.. ಅಭಿಮಾನಿಗಳು ತೋರಿದ ಪ್ರೀತಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ..

ಧೋನಿ ಹಾಗೂ ರೋಹಿತ್ ಶರ್ಮಾ ಅವರು ಸೋತಾಗ ಕಣ್ಣೀರಿಟ್ಟಿದ್ದು ನಿಜಕ್ಕೂ ಕೋಟ್ಯಾನು ಕೋಟಿ ಭಾರತೀಯರು ಕಣ್ಣೀರಿಡುವಂತೆ ಮಾಡಿಬಿಟ್ಟಿತ್ತು..

ಅದೇ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಮಯ ಪ್ರಜ್ಞೆ ಮೆರೆದು ಆಟಗಾರರಿಗೆ ಸಾಂತ್ವಾನದ ಮಾತುಗಳನ್ನಾಡಬೇಕೆಂದು.. ತಮ್ಮ ಟ್ವಿಟ್ಟರ್ ನಲ್ಲಿ ಆಟಗಾರರನ್ನು ಉದ್ದೇಶಿಸಿ ಸಂದೇಶವೊಂದನ್ನು ಕಳುಹಿಸಿದ್ದಾರೆ..

“ಇಂದಿನ ಪಂದ್ಯದಲ್ಲಿ ಬೇಸರದ ಫಲಿತಾಂಶ ಲಭಿಸಿದೆ. ಆದರೆ ಪಂದ್ಯದ ಅಂತಿಮ ಕ್ಷಣದವರೆಗೂ ಆಟಗಾರರು ತೋರಿದ ಹೋರಾಟ ಸ್ಫೂರ್ತಿ ನೀಡುತ್ತದೆ. ಇಡೀ ಟೂರ್ನಿಯಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೆಮ್ಮೆ ಎನಿಸಿದೆ. ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಶುಭವಾಗಲಿ” ಎನ್ನುವ ಮೂಲಕ ಸೋತ ಆಟರರನ್ನು ಹುರಿದುಂಬಿಸಿದ್ದಾರೆ..

ವಿರಾಟ್ ಕೋಹ್ಲಿ ಅವರೂ ಕೂಡ “ತಂಡಕ್ಕೆ ಬೆಂಬಲ ನೀಡಿದಕ್ಕೆ ಧನ್ಯವಾದ. ಗೆಲುವು ಪಡೆಯಲು ಸಂಪೂರ್ಣ ಪ್ರಯತ್ನ ಹಾಕಿದ್ದು, ಫಲಿತಾಂಶದಿಂದ ನಿಮ್ಮಂತೆಯೇ ನಾವೆಲ್ಲರೂ ನಿರಾಸೆಗೊಂಡಿದ್ದೇವೆ.. 45 ನಿಮಿಷಗಳ ಕೆಟ್ಟ ಪ್ರದರ್ಶನಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂತು.. ಅಲ್ಲದೇ ನ್ಯೂಜಿಲೆಂಡ್ ಆಟಗಾರರು ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ