ಪುರಾಣಗಳಲ್ಲಿ ಮನೆಯಲ್ಲಿ ಬಳಸುವ ಹಲವಾರು ಸಣ್ಣ ಸಣ್ಣ ವಸ್ತುಗಳಿಗೆ ಬಹಳ ದೊಡ್ಡ ಮಹತ್ವವಿದೆ. ಅಂತಹ ವಸ್ತುಗಳಲ್ಲಿ ಪೊರಕೆಯೂ ಒಂದು.. ಈಗಲೂ ಮನೆಯಲ್ಲಿ ಹಿರಿಯರು ಯಾರಾದರೂ ಇದ್ದರೆ, ಅವರ ಮುಂದೆ ಪೊರಕೆಯನ್ನು ಕಾಲಿನಿಂದ ಒದ್ದರೆ, ತಕ್ಷಣ ಬೈಯುತಾರೆ. ಪೊರಕೆ ಲಕ್ಷ್ಮಿ ಸಮಾನ, ನಮಸ್ಕಾರ ಮಾಡಿಕೋ ಎನ್ನುತ್ತಾರೆ. ಅವರುಗಳ ಮಾತು ಅಕ್ಷರಶಃ ಸತ್ಯ..

ಮನೆಯಲ್ಲಿ ಪೊರಕೆಯನ್ನು ಎಲ್ಲೆಂದರಲ್ಲಿ, ಹೇಗಂದರೆ ಹಾಗೆ ಇಟ್ಟರೆ ಕಷ್ಟಗಳು ಒಂದಾದ ಮೇಲೊಂದರಂತೆ ನಮ್ಮ ಬೆನ್ನ ಹಿಂದೆ ಬರುತ್ತಲೇ ಇರುತ್ತವೆ. ಹಾಗಾದರೆ ಮನೆಯಲ್ಲಿ ಪೊರಕೆಯನ್ನು ಎಲ್ಲಿ ಇಡಬೇಕು ಗೊತ್ತಾ? ಇಲ್ಲಿದೆ ನೋಡಿ.. ಮನೆಯಲ್ಲಿ ಪೊರಕೆಯನ್ನು ಪಶ್ಚಿಮ ದಿಕ್ಕಿನ ಯಾವುದಾದರೂ ಮೂಲೆಯಲ್ಲಿ ಇಡಬೇಕು, ದೇವರ ಮನೆಯ ಅಕ್ಕ ಪಕ್ಕದ ಮೂಲೆಗಳಲ್ಲಿ ಪೊರಕೆಯನ್ನು ಇಡಬಾರದು.

ಪೊರಕೆಯನ್ನು ನೆಟ್ಟಗೆ ನಿಲ್ಲಿಸುವಂತೆ ಇಡಬಾರದು. ಹಾಗೇನಾದರೂ ನೇರವಾಗಿ ನಿಲ್ಲಿಸಿ ಇಟ್ಟರೆ ಆ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತವೆ. ದಾರಿದ್ರ್ಯ ಬೆನ್ನ ಹಿಂದೆ ಬಂದು ನಿಲ್ಲುತ್ತವೆ. ಹಾಗೆಯೇ ಮನೆಗಳಲ್ಲಾಗಲಿ ಅಥವಾ ನಾವು ಕೆಲಸ ಮಾಡುವ ಜಾಗಗಳಲ್ಲಾಗಲಿ ಪೊರಕೆಯನ್ನು ಕಣ್ಣಿಗೆ ಕಾಣುವಂತೆ ಇಡಬಾರದು. ಕಣ್ಣಿಗೆ ಕಾಣುವಂತೆ ಇಟ್ಟರೆ ಅಲ್ಲಿನ ಸಕಾರಾತ್ಮಕ ಶಕ್ತಿ ಕುಂದುತ್ತದೆ, ಹಾಗೂ ಇದು ಅಪಶಕುನವೆಂಬ ನಂಬಿಕೆ ಇದೆ.

ಕೊಳೆಯಾದ ಪೊರಕೆಯನ್ನು ಹಾಗೂ ತುಂಡಾದ ಪೊರಕೆಯನ್ನು ಬಳಸಬಾರದು. ಹೀಗೆ ಬಳಸಿದರೆ ಮನೆಯಲ್ಲಿ ಲಕ್ಷ್ಮಿ ಹೆಚ್ಚೊಲ್ಲ.. ಆದಷ್ಟು ಪೊರಕೆ ಶುದ್ಧವಾಗಿರಲಿ, ಹಾಗೂ ತುಂಡಾಗುತ್ತಿದ್ದ ಹಾಗೆ ಪೊರಕೆಯನ್ನು ಬದಲಾಯಿಸಿ. ಹಾಗೆಯೆ ಪೊರಕೆಯನ್ನು ತೊಳೆಯುವಾಗ ಶುದ್ಧ ನೀರಿನಿಂದ ತೊಳೆಯಬೇಕು.. ಮನೆ ಒರೆಸಿದ ನೀರಿನಿಂದಲೋ ಅಥವಾ ಇನ್ಯಾವುದೋ ಗಲೀಜು ನೀರಿನಿಂದ ಪೊರಕೆಯನ್ನು ತೊಳೆಯಬಾರದು.

ಮನೆ ಗುಡಿಸುವಾಗ ಪೊರಕೆಯಲ್ಲಿ ಕೂದಲು ಸಿಕ್ಕರೆ ಅದನ್ನು ಆ ದಿನವೇ ತೆಗೆದು ಕ್ಲೀನ್ ಮಾಡಿ.. ಪೊರಕೆಯಲ್ಲಿನ ಕಸವನ್ನು ಆಗಿಂದ್ದಾಗೆ ತೆಗೆಯುತ್ತಿರಬೇಕು. ಸಂಜೆಯ ನಂತರ ಮನೆಯ ಕಸವನ್ನು ಗುಡಿಸಬಾರದು. ಸಂಜೆಯ ಸಮಯದಲ್ಲಿ ಮನೆಗೆ ಲಕ್ಷ್ಮಿ ಬರುವಳು ಎಂಬ ನಂಬಿಕೆ ಇದೆ. ಆ ಸಮಯದಲ್ಲಿ ಪೊರಕೆಯನ್ನು ಹಿಡಿದು ನಿಲ್ಲಬಾರದು. ಹಾಗೆಯೇ ಸಂಜೆಯ ನಂತರ ಮನೆಯ ಕಸವನ್ನು ಹೊರಗೂ ಹಾಕಬಾರದು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ