ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ನಮಗೆ ಅರಿವಿಲ್ಲದಂತೆ ಹಲವಾರು ವಸ್ತುಗಳನ್ನು ಇಟ್ಟುಕೊಂಡಿರುತ್ತೇವೆ. ಆದರೆ ಅಂತಹ ಕೆಲವೊಂದು ವಸ್ತುಗಳಿಂದ ನಕಾರಾಥ್ಮಕ ಶಕ್ತಿ ಆವರಿಸಿ ನಮಗೆ ಕೆಡುಕುಂಟಾಗಬಹುದು. ಹೌದು ಅಂತಹ ಕೆಲವೊಂದು ವಸ್ತುಗಳು ಇಲ್ಲಿವೆ ನೋಡಿ… ನಿಮ್ಮ ಕೋಣೆಯಲ್ಲಿ ಇವುಗಳು ಇದ್ದರೆ ಅದನ್ನು ದೂರವಿಡಿ..

ಎಣ್ಣೆ : ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಎಣ್ಣೆಯನ್ನುನ ತಲೆಯ ಬಳಿ ಇಟ್ಟು ಮಲಗಬೇಡಿ, ಈ ರೀತಿ ಮಾಡಿದರೆ ಇದು ಜೀವನದಲ್ಲಿ ಪರಿಣಾಮ ಬೀರಿ ಕಷ್ಟಗಳು ಹೆಚ್ಚಾಗುತ್ತವೆ ಎನ್ನುತ್ತಾರೆ.
ಕನ್ನಡಿ : ಮಲಗುವ ಕೋಣೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಕನ್ನಡಿ ಇಟ್ಟಿರುತ್ತೇವೆ. ಬೆಳಿಗ್ಗೆ ಎದ್ದ ಕೂಡಲೇ ಬೇರೆ ಕೆಲಸ ಮಾಡದೇ ಇದ್ದರೂ ಕನ್ನಡಿಯಲ್ಲಿ ಪಮ್ಮೆ ಮುಖ ನೋಡಿಕೊಳ್ಳುವ ಅಭ್ಯಾಸ ಬಹಳಷ್ಟು ಮಂದಿಗೆ ಇದ್ದೇ ಇರುತ್ತದೆ. ಆದರೆ ಮಲಗುವಾಗ ಬೆಡ್ ಎದುರು ಕನ್ನಡಿಯನ್ನು ಇಡಬಾರದು, ಇದರಿಂದ ಗಂಡ ಹೆಂಡತಿ ನಡುವೆ ವೈಮನಸ್ಸೂ ಮೂಡುತ್ತದೆ ಹಾಗೆಯೇ ಅನಾರೋಗ್ಯಕ್ಕೂ ತುತ್ತಾಗಬಹುದು.

ನೀರು : ಮಲಗುವ ಸಮಯದಲ್ಲಿ ನೀರನ್ನು ನಾವು ಇಟ್ಟುಕೊಂಡು ಮಲಗುವುದು ಸಾಮಾನ್ಯ. ಆದರೆ ನೀರಿನ ಪಾತ್ರೆಯನ್ನು ತಲೆಯ ಬಳಿ ಇಟ್ಟುಕೊಳ್ಳಬೇಡಿ. ಇದರಿಂದ ಚಂದ್ರನ ಪ್ರಭಾವ ಬೀರಿ ಮನೋರೋಗ ಕಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಮೊಬೈಲ್ : ಈಗಿನ ಕಾಲದಲ್ಲಿ ಏನು ಬೇಕಾದರೂ ಬಿಟ್ಟಿರುತ್ತೇವೆ ಆದರೆ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಬಾತ್ ರೂಮಿಗೆ ಹೋಗುವಾಗಲೂ ಮೊಬೈಲ್ ಬಳಸುವುದನ್ನು ನಾಔಈಗ ನೋಡಬಹುದು. ಮಲಗುವ ಸಮಯದಲ್ಲಿ ತಲೆ ದಿಂಬಿನ ಅಡಿಯಲ್ಲಿ ಮೊಬೈಲ್ ಇಟ್ಟು ಮಲಗುವುದು ಸಹಜ. ಆದರೆ ಮೊಬೈಲ್ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ತಲೆಯ ಬಳಿ ಇಟ್ಟರೆ ರಾಹುದೋಷ ಉಂಟಾಗುತ್ತದೆ.

ಚಪ್ಪಲಿ : ಕೆಲವರು ಮನೆಯೊಳಗೂ ಚಪ್ಪಲಿ ಬಳಸುವ ಅಭ್ಯಾಸವನ್ನು ಹೊಂದಿದ್ದಾರೆ. ಅಂತಹವರು ಮಲಗುವ ಮಂಚದ ಕೆಳಗೆ ಚಪ್ಪಲಿಯನ್ನು ಬಿಡಬೇಡಿ, ಇದರಿಂದ ದಾರಿದ್ರ್ಯ ಲಕ್ಷ್ಮಿಗೆ ಆಹ್ವಾನ ಕೊಟ್ಟಂತಾಗುತ್ತದೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ