ಗಾಯಕ ವಿಜಯ್ ಪ್ರಕಾಶ್ ಅವರ ತಂದೆ ಕಳೆದ ಏಪ್ರಿಲ್ ೭ ರಂದು ಅನಾರೋಗ್ಯದ ಕಾರಣ ಮೈಸೂರಿನ ಕಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಆದರೆ ಆ ಸಮಯದಲ್ಲಿ ವಿಜಯ್ ಪ್ರಕಾಶ್ ಅವರು ಭಾರತದಲ್ಲಿರಲಿಲ್ಲ. ವಿದೇಶ ಪ್ರವಾಸದಲ್ಲಿದ್ದರು. ವಿಷಯ ತಿಳಿದ ತಕ್ಷಣ ಮರಳಿ ಭಾರತಕ್ಕೆ ಬಂದು ತಂದೆ ಅಂತ್ಯಕ್ರಿಯೆ ನೆರವೇರಿಸಿದರು.

ಮಗ ಅಷ್ಟು ದೊಡ್ಡ ಗಾಯಕನಾದರೂ ವಿಜಯ್ ಪ್ರಕಾಶ್ ಅವರ ತಂದೆ ಬೆಂಗಳೂರಿಗೆ ಹೋಗದೆ ಮೈಸೂರಿನಲ್ಲಿಯೇ ವಿಜಯ್ ಪ್ರಕಾಶ್ ಅವರು ಹುಟ್ಟಿ ಬೆಳೆದ ಮನೆಯಲ್ಲಿಯೇ ವಾಸವಿದ್ದರು. ಅವರ ಅಂತಿಮ ಕಾರ್ಯಗಳು ಕೂಡ ಮೈಸೂರಿನಲ್ಲೇ ನೆರವೇರಿದವು.
ಅಪ್ಪನ ಸಾವಿನಿಂದ ನೊಂದ ವಿಜಯ ಪ್ರಕಾಶ್ ಅವರು ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯ್ ಪ್ರಕಾಶ್ ಅವರು ತಮ್ಮ ತಂದೆಯ ಸಾವಿನಿಂದ ನೊಮದು ಕಾರ್ಯಕ್ರಮಕ್ಕೆ ಬರುವುದನ್ನು ನಿಲ್ಲಿಸಿದರು. ನಂತರ ತಂದೆಯ ಎಲ್ಲಾ ಕಾರ್ಯಗಳು ಮುಗಿದ ಬಳಿಕ ನೋವು ಮರೆಯಲು ವಿಜಯ್ ಪ್ರಕಾಶ್ ಅವರು ಹಲವು ದಾರಿಗಳನ್ನು ಹುಡುಕಿಕೊಂಡರು..

ಹೌದು ವಿಜಯ್ ಪ್ರಕಾಶ್ ಅವರು ನೋವು ಮರೆಯುವ ಸಲುವಾಗಿ ತಮ್ಮ ಕುಟುಂಬದ ಸಮೇತ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲು ಶುರು ಮಾಡಿದರು. ಅಷ್ಟೇ ಅಲ್ಲದೆ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಅಲ್ಲಿ ಸಾಮಾನ್ಯನಂತೆ ದೇವರ ಮುಂದೆ ಕುಳಿತು ಕೀರ್ತನೆಗಳನ್ನು ಹಾಡುತ್ತಾ ನೋವನ್ನು ಮರೆಯುತ್ತಿದ್ದರು.

ಇದೀಗ ನೋವಿನಿಂದ ಸ್ವಲ್ಪ ಮಟ್ಟಿಗೆ ಹೊರ ಬಂದಿರುವ ವಿಜಯ್ ಪ್ರಕಾಶ್ ಅವರು ಮುಂದಿನ ವಾರದಿಂದ ಸರಿಗಮಪ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಕುರಿತು ಅಭಿಮಾನಿಗಳಿಗೆ ಸ್ವತಃ ವಿಜಯ್ ಪ್ರಕಾಶ್ ಅವರೇ ತಿಳಿಸಿದ್ದು ಮುಂದಿನ ವಾರದಿಂದ ಬರುವೆ ಎಂದಿದ್ದಾರೆ.
ನಾವುಗಳು ಒಂದು ಪದದಲ್ಲಿ ಓಂ ಶಾಂತಿ ಎಂದೋ, ಆರ್‌ಯಪಿ ಎಂದೋ ಕಮೆಂಟ್ ಹಾಕಿಬಿಡಬಹುದು ಆದರೆ ತಂದೆಯನ್ನು ಕಳೆದುಕೊಂಡ ನೋವು ಕಳೆದುಕೊಂಡವರಿಗೆ ಮಾತ್ರವೇ ಗೊತ್ತು. ಆ ದೇವರು ವಿಜಯ್ ಪ್ರಕಾಶ್ ಅವರಿಗೆ ನೋವು ತಡೆಯುವ ಶಕ್ತಿ ನೀಡಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ