ಇಂದು ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಅಂಗವಾಗಿ ರಾಜ್ಯದ ನಾನಾ ಮೂಲೆಗಳಲ್ಲಿಯೂ ಅಭಿಮಾನಿಗಳು ರಕ್ತದಾನ.. ಅನ್ನದಾನ.. ಆರೋಗ್ಯ ತಪಾಸಣಾ ಶಿಬಿರ.. ಹೀಗೆ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ.. ಹಾಗೆಯೇ ಬೆಂಗಳೂರಿನ ಡಾ.ವಿಷ್ಣು ವರ್ಧನ್ ಅವರ ಪುಣ್ಯ ಭೂಮಿಯಲ್ಲಿ ಅನೇಕ ಗಣ್ಯಾತಿಗಣ್ಯರು ಆಗಮಿಸಿ‌ ಪೂಜೆ ಸಲ್ಲಿಸಿ ಹುಟ್ಟು ಹಬ್ಬ ಆಚರಿಸಿ ಹೋದರು..

ಆದರೆ ಇಂದು ವಿಷ್ಣು ಕುಟುಂಬವನ್ನು ಕಾಣದ ಊರೊಂದು ಕೈಬೀಸಿ ಕರೆದು ನೆನಪಿನ ಬುತ್ತಿಯ ತೆರೆ ಎಂದಿತ್ತು.. ಹೌದು ಇಂದು ಭಾರತಿ ವಿಷ್ಣುವರ್ಧನ್ ಅವರು.. ಅನಿರುದ್ಧ್ ಅವರು.. ಕೀರ್ತಿ ವಿಷ್ಣುವರ್ಧನ್ ಅವರು ಕುಟುಂಬ ಸಮೇತ ದೂರದ ಊರೊಂದಕ್ಕೆ ತೆರಳಿದ್ದರು.. ಆ ಊರು ಮತ್ಯಾವುದೂ ಅಲ್ಲ.. ವಿಷ್ಣು ಸರ್ ಅವರ ಉಸಿರು ಬೆರೆತಿರುವ ಮೈಸೂರು.. ಮೈಸೂರಿನಲ್ಲಿ ವಿಷ್ಣು ಸರ್ ಹಾಗೂ ಭಾರತಿ ಅವರ ಸಾವಿರಾರು ನೆನಪುಗಳಿವೆ.. ವಿಷ್ಣು ಸರ್ ಹುಟ್ಟಿದ ಪುಣ್ಯ ಮಣ್ಣಿನಲ್ಲಿ ಭಾವನೆಗಳು ಬೆರೆತುಹೋಗಿವೆ.. ಇದೇ ಮಣ್ಣಿನಲ್ಲಿ ಸ್ಮಾರಕ ನಿರ್ಮಾಣದ ಪಣ ತೊಟ್ಟ ಆ ಭಗವಂತ ಸಾಕಾರಗೊಳಿಸುವ ಸಮಯ ಸನಿಹಬಂದಿದೆ..

ಹೌದು ಕೆಲ ತಿಂಗಳ ಹಿಂದಷ್ಟೇ ವಿಷ್ಣು ಸರ್ ಅವರ ಸ್ಮಾರಕದ ವಿಚಾರ ಸುಖಾಂತ್ಯವಾಗಿದ್ದು ಮೈಸೂರಿನ ಉದ್ಬೂರಿನ ಬಳಿಯ 5 ಎಕರೆ ಭೂಮಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಕ್ಕಿತು.. ಇಂದು ವಿಷ್ಣು ಸರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇದೇ ಸ್ಮಾರಕದ ಮಣ್ಣನ್ನು ಸ್ಪರ್ಶಿಸುವ ಸಲುವಾಗಿ ಇಡೀ ಕುಟುಂಬ ಮೈಸೂರಿಗೆ ಆಗಮಿಸಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.. ಹೌದು ಸ್ಮಾರಕದ ಜಾಗದಲ್ಲಿ 69 ಗಿಡಗಳನ್ನು ನೆಟ್ಟು ಅನಿರುದ್ಧ್ ಅವರು ಹುಟ್ಟುಹಬ್ಬದ ಅಂಗವಾಗಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.. .

ಇದು ಸ್ಮಾರಕವಷ್ಟೇ ಅಲ್ಲ ಇದು ನೆಮ್ಮದಿಯ ತಾಣವಾಗಬೇಕು.. ಇದಕ್ಕೆ ಎಲ್ಲಾ ರೀತಿಯ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೇ ಸಾಗುತ್ತಿದೆ ಎಂದು ಭಾರತಿ ವಿಷ್ಣುವರ್ಧನ್ ಅವರು ತಿಳಿಸಿದರು..

ಇಷ್ಟಕ್ಕೆ ಸುಮ್ಮನಾಗದೇ ಅರಮನೆ ನಗರಿಗೆ ದಸರಾ ಅಂಗವಾಗಿ ಆಗಮಿಸಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳ ಬಳಿ ಇಡೀ ಕುಟುಂಬ ತೆರಳಿ ಮಕ್ಕಳಿಗೆ ಕೇಕ್… ಪುಸ್ತಕ ಪೆನ್ನುಗಳನ್ನು ನೀಡಿ ವಿಷ್ಣು ಸರ್ ಅವರ ಹುಟ್ಟುಹಬ್ಬದ ಆಚರಣೆಗೆ ಒಂದು ಅರ್ಥ ನೀಡಿದರು.. ಈ ವರ್ಷ ಮಾತ್ರವಲ್ಲ.. ಇನ್ನು ಮುಂದೆ ಪ್ರತಿ ವರ್ಷ ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲಾಗುವುದು.. ಇನ್ನೆರೆಡು ವರ್ಷದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣ ಗೊಳ್ಳಲಿದೆ ಆಗ ಇನ್ನಷ್ಟು ಜನರಿಗೆ ಉಪಯೋಗವಾಗುವಂತೆ ಹುಟ್ಟುಹಬ್ಬ ಆಚರಿಸಲಾಗುವುದು ಎಂದು ಅನಿರುದ್ಧ್ ಅವರು ತಿಳಿಸಿದರು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ