ಇಂದು ಕರುನಾಡಿನ ಮಾಣಿಕ್ಯ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ..‌ ಅಭಿನಯ ಭಾರ್ಗವ ಮರೆಯಲಾಗದ ಮಾಣಿಕ್ಯ ಅವರು..ಅವರ ಬಗ್ಗೆ ಮಾತನಾಡಲು ನಾವು ಬಹಳ ಸಣ್ಣವರು.. ಅಂತಹ ಮಹಾನ್ ವ್ಯಕ್ತಿತ್ವ ಆ ಮಹಾನುಭಾವರದ್ದು.. ಅಂತಹ ಮಹಾನ್ ವ್ಯಕ್ತಿಗೆ ಮಗನೊಬ್ಬರಿದ್ದಾರೆ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ.. ಇಲ್ಲಿದೆ ನೋಡಿ..

ಇಂದು ವಿಷ್ಣು ಸರ್ ಹುಟ್ಟುಹಬ್ಬ.. ವಿಷ್ಣು ವರ್ಧನ್ ಅವರು ಕಣ್ಮರೆಯಾಗಿ 10 ವರ್ಷಗಳು ಆದರೂ ಅಭಿಮಾನಿಗಳಲ್ಲಿ ಅವರನ್ನು ಆರಾಧಿಸುವವರಲ್ಲಿ ಎಲ್ಲೂ ಕಿಂಚಿತ್ತೂ ಅಭಿಮಾನ ಕಡಿಮೆಯಾಗಲಿಲ್ಲ.. ಇದಕ್ಕೆ ಸಾಕ್ಷಿ ನಾಗರಹಾವು ಸಿನಿಮಾ ಮತ್ತೆ ಬಿಡುಗಡೆಯಾದಾಗ ಸಿಕ್ಕ ಯಶಸ್ಸು.. ಅದಿರಲಿ ಬಿಡಿ.. ಮಹಾನುಭಾವನ ಹೆಸರಿನಲ್ಲಿ ಈಗಲೂ ಅನೇಕ ಪುಣ್ಯ ಕಾರ್ಯಗಳು ನಡೆಯುತ್ತಲೇ ಬರುತ್ತಿವೆ.. ಕೆಲವು ಅಭಿಮಾನಿಗಳು ಮಾಡಿದರೆ.. ಬಹಳಷ್ಟು ವಿಷ್ಣು ಸರ್ ಮಗ ಮಾಡಿಕೊಂಡು ಬರುತ್ತಿದ್ದಾರೆ.. ಆದರೆ ಬಲಗೈ ನಲ್ಲಿ ಕೊಟ್ಟದ್ದು ಎಡ ಗೈ ಗೆ ತಿಳಿಯಬಾರದು ಎನ್ನುವಂತೆ ಎಲ್ಲಿಯೂ ಪ್ರಚಾರ ಪಡೆಯದೆ ವಿಷ್ಣು ಸರ್ ಅವರಂತೆಯೇ ದೊಡ್ಡ ಗುಣ ಮೆರೆಯುತ್ತಿದ್ದಾರೆ..

ಅಷ್ಟೇ ಅಲ್ಲದೆ.‌ ವಿಷ್ಣು ಸರ್ ಅವರು ಹಾಕಿಕೊಂಡಿದ್ದ ಬಳೆಯ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡಿದವು‌‌.. ಆದರೆ ವಾಸ್ತವ ಬೇರೆಯೇ ಇದೆ‌‌.. ಹೌದು ಆ ಬಳೆ ಇದೇ ಮಗನ ಕೈನಲ್ಲಿ ಇದೆ.‌.. ವಿಷ್ಣು ಸರ್ ಇಲ್ಲವಾದ ದಿನದಿಂದಲೂ ಕುಟುಂಬದ ಜವಾಬ್ದಾರಿಯ ಜೊತೆಗೆ ವಿಷ್ಣು ಸರ್ ಸ್ಮಾರಕದ ವಿಷಯ ಬಂದಾಗ ಬಹಳ ನೋವು ತಿಂದರೂ ಎಲ್ಲರೊಂದಿಗೆ ಪ್ರೀತಿಯಿಂದಲೇ ಇರುತ್ತಾರೆ..

ಯಾರಿವರು? ಇವರು ಮತ್ಯಾರೂ ಅಲ್ಲ.. ಅನಿರುದ್ಧ್ ಅವರು.. ಬಹುತೇಕರಿಗೆ ಅನಿರುದ್ಧ್ ಅವರು ವಿಷ್ಣು ಸರ್ ಹಾಗೂ ಭಾರತಿ ಅಮ್ಮನವರ ಅಳಿಯ ಎಂದಷ್ಟೇ ಗೊತ್ತು.. ಆದರೆ ಹತ್ತಿರದಿಂದ ನೋಡಿದವರಿಗೆ ಮಾತ್ರವೇ ಗೊತ್ತು ಅನಿರುದ್ಧ್ ಅವರು ವಿಷ್ಣು ಸರ್ ಅವರಿಗೆ ಮಗನಿಗಿಂತ ಹೆಚ್ಚೆಂಬುದು.. ಅನಿರುದ್ಧ್ ಅವರೂ ಕೂಡ ಅಷ್ಟೇ ಪ್ರೀತಿ ಜವಾಬ್ದಾರಿಯಿಂದ ವಿಷ್ಣು ಸರ್ ಜೊತೆಗಿದ್ದರು.. ಈಗಲೂ ಕೂಡ ವಿಷ್ಣು ಸರ್ ಅವರನ್ನು ಅಪ್ಪಿ ತಪ್ಪಿಯೂ ಅಪ್ಪ ಅನ್ನದೇ ಬಾಯಿ ತೆಗೆಯುವುದಿಲ್ಲ..

ಈಗ ಅನಿರುದ್ಧ್ ಅವರ ಕೈನಲ್ಲಿ ಇರುವ ಬಳೆಯೂ ಕೂಡ ವಿಷ್ಣು ಸರ್ ಅವರದ್ದೇ.. ವಿಷ್ಣು ಸರ್ ಅವರಿಗೆ ಇಬ್ಬರು ಮೊಮ್ಮಕ್ಕಳು.. ಹೌದು ಅನಿರುದ್ಧ್ ಹಾಗೂ ಕೀರ್ತಿ ದಂಪತಿಯ ಮುದ್ದು ಮಕ್ಕಳು ಜ್ಯೇಷ್ಠ ವರ್ಧನ್ ಹಾಗೂ ಶ್ಲೋಕ.. ಇಲ್ಲಿದೆ ನೋಡಿ ವಿಷ್ಣು ಸರ್ ವಂಶದ ಕುಡಿಗಳ ಫೋಟೋ..

ಇನ್ನು ಅನಿರುದ್ಧ್ ಅವರ ಬಗ್ಗೆ ಜ಼ೀ ಕನ್ನಡದ ಬ್ಯುಸಿನೆಸ್ ಹೆಡ್ ಆದ ರಾಘವೇಂದ್ರ ಹುಣಸೂರು ಅವರು ಆಡಿದ್ದು ಒಂದೇ ಮಾತು.. ಹೌದು ಕಳೆದ ವಾರ ಜ಼ೀ ಕನ್ನಡ ಚಾನಲ್ ನಲ್ಲಿ ಶುರುವಾದ ಜೊತೆಜೊತೆಯಲಿ ಹೊಸ ಧಾರಾವಾಹಿಯಲ್ಲಿ ಆಗರ್ಭ ಶ್ರೀಮಂತನ ಸರಳ ವ್ಯಕ್ತಿತ್ವ ತೋರುವ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಅವರು ಕಾಣಿಸಿಕೊಂಡಿದ್ದಾರೆ.. ಈ ಬಗ್ಗೆ ರಾಘವೇಂದ್ರ ಹುಣಸೂರ್ ಅವರು ಮಾತನಾಡುವಾಗ ಈ ಪಾತ್ರಕ್ಕೆ ಅನಿರುದ್ಧ್ ಅವರು ಒಪ್ಪಿಕೊಳ್ಳುತ್ತಾರಾ ಎಂಬ ಸಂಶಯದಿಂದಲೇ ಅವರ ಬಳಿ ಕೇಳಿದ್ವಿ.. ಆದರೆ ಅವರು ಒಪ್ಪಿಕೊಂಡಿದ್ದು ಬಹಳ ದೊಡ್ಡ ವಿಷಯ.. ನಿಜಕ್ಕೂ ನಮ್ಮ ಪುಣ್ಯ.. ಎಂದಿದ್ದರು.. ಇದೊಂದು ಮಾತು ಸಾಕು ಅನಿರುದ್ಧ್ ಅವರ ಬಗ್ಗೆ ತಿಳಿಯಲು..

ಈಗಲೂ ಅನಿರುದ್ಧ್ ಅವರು ಪ್ರತಿಷ್ಠಿತ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾರೆ.. ಅಷ್ಟೇ ಅಲ್ಲದೆ ವಿಭಾ(ವಿಷ್ಣು ವರ್ಧನ್ ಭಾರತಿ) ಟ್ರಸ್ಟ್ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ಅಶಕ್ತರಿಗೆ ನೆರವಾಗಿ ನಿಂತಿದ್ದಾರೆ.. ಇಂದಿಗೂ ವಿಷ್ಣು ಸರ್ ಅವರ ಕಾರ್ಯಕ್ರಮಗಳಲ್ಲಿ ಹಾಡಿ ಅಭಿಮಾನಿಗಳನ್ನು ಮನರಂಜಿಸುವ ಅನಿರುದ್ಧ್ ಅವರ ಬಳಿ ವಿಷ್ಣು ಸರ್ ಬಗ್ಗೆ ಕೇಳಿದರೆ ಅವರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತವೆ.. ಮಾತು ತೊದಲುತ್ತವೆ.. ನೆನಪುಗಳು ಕಾಡುತ್ತವೆ.. ಇನ್ನೇನು ಹೇಳಲಾಗದು..

ಮೇರು ವ್ಯಕ್ತಿತ್ವದ ಮರೆಯಲಾಗದ ಮಾಣಿಕ್ಯನ ಇಡೀ ಕುಟುಂಬ ನೂರ್ಕಾಲ ಸಂತೋಷದಿಂದಿರಲಿ ಎಂಬುದೇ ಕನ್ನಡಿಗರ ಹಾರೈಕೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ