ಕರುನಾಡು ಕಂಡ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಅಣ್ಣಾಮಲೈ ಅವರೂ ಕೂಡ ಒಬ್ಬರು.. ತಮಿಳುನಾಡು ಮೂಲದವರಾದರೂ ಕರ್ನಾಟಕ ಜನರ ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಿತ್ತು ಅವರ ಕರ್ತವ್ಯ ವೈಖರಿ..

ಕೇವಲ 33 ವರ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು.. ಅಮರನಾಥ ಯಾತ್ರೆಯಲ್ಲಿ ಭಯೋತ್ಪಾದಕರ ದಾಳಿಯ ಮುನ್ಸೂಚನೆ ಇದ್ದಾಗ ಖುದ್ದು ಅಣ್ಣಾಮಲೈ ಅವರನ್ನೇ ಆ ಜಾಗಕ್ಕೆ ಪೋಸ್ಟಿಂಗ್ ಮಾಡಿದ್ದರು…

ಇಂತಹ ದಕ್ಷ ಅಧಿಕಾರಿ ಇದ್ದಕ್ಕಿಂದಂತೆ ಒಂದು ದಿನ ತಮ್ಮ ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದ್ದು ನಿಜಕ್ಕೂ ಕನ್ನಡಿಗರಿಗೆ ಬಹಳಷ್ಟು ನೋವನ್ನುಂಟು ಮಾಡಿತ್ತು..

ಇದಕ್ಕೆ ಆ ಸಮಯದಲ್ಲಿ ಅಣ್ಣಾಮಲೈ ಅವರು ಒಂದು ಪತ್ರದ ಮೂಲಕ ಕಾರಣಗಳನ್ನು ನೀಡಿದ್ದರು.. ಫ್ಯಾಮಿಲಿಯೊಣ್ದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ.. ಕೆಲಸಕ್ಕೆ ಸೇರಿದಾಗಿನಿಂದ ಇದುವರೆಗೂ ಕೇವಲ ಒಂದೇ ಒಂದು ಮದುವೆಯಲ್ಲಿ ಮಾತ್ರ ಭಾಗಿಯಾಗಿರುವೆ.. ಇನ್ನು ಮುಂದೆ ಮಗನ ಬೆಳವಣಿಗೆಯನ್ನು ನೋಡುವೆ.. ಎಷ್ಟು ದಿನ ಅಂತ ಕ್ರೈಂ ಅನ್ನೇ ನೋಡುತಿರಲಿ.. ಕೆಲ ಸಮಯ ಬಿಟ್ಟು ನಂತರ ಏನು ಮಾಡಬೇಕು ಎಂದು ನಿರ್ಧರಿಸುವೆ ಎಂದಿದ್ದರು..

ಅದಾದ ನಂತರ ಅಣ್ಣಾಮಲೈ ಅವರು ಶಬರಿಮಲೆಗೆ ತೆರಳಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದಿದ್ದರು.. ಅಣ್ಣಾಮಲೈ ಅವರು ಮುಂದೆ ಏನು ಮಾಡುವರು ಎಂಬ ಕುತೂಹಲ ಕನ್ನಡಿಗರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿತ್ತು..

ಇದೀಗ ಆ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.. ಕನ್ನಡದ ಪ್ರಖ್ಯಾತ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಣ್ಣಾಮಲೈ ಅವರನ್ನು ನೋಡಬೇಕು ಎಂದು ಲಕ್ಷಾಂತರ ಜನರು ಜೀ ಕನ್ನಡಕ್ಕೆ ಪತ್ರ, ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದರು..

ಆದರೆ ಆ ಸಮಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಫಿನಾಲೆಯಲ್ಲಿ ಕೂಡಿಬಂತು.. ಸಾಧಕರ ಸೀಟ್ ನಲ್ಲಿ ಕೂರಲು ನಾನಿನ್ನು ಅಂತಹ ಸಾಧನೆ ಏನೂ ಮಾಡಿಲ್ಲ ಎಂದು ದೊಡ್ಡಗುಣ ತೋರಿದ ಅಣ್ಣಾಮಲೈ ಅವರು ನಿಜಕ್ಕೂ ಗ್ರೇಟ್..

ಅದಕ್ಕಾಗಿಯೇ ಫಿನಾಲೆಯಲ್ಲಿ ಕಾರ್ಯಕ್ರಮಕ್ಕೆ ಬಂದು ವೇದಿಕೆ ಮೇಲೆ ನಿಂತೇ ತಮ್ಮ ಜೀವನದ ಕೆಲವು ಘಟನೆಗಳನ್ನು ಹಂಚಿಕೊಂಡರು.. ನಂತರ ಪ್ರೇಕ್ಷರೊಂದಿಗೆ ಸಂವಾದದಲ್ಲೂ ಅಷ್ಟೇ ವಿನಯವಾಗಿ ತೊಡಗಿಕೊಂಡರು..

ಈ ಸಮಯದಲ್ಲಿಯೇ ಅಣ್ಣಾಮಲೈ ಅವರು ರಾಜಿನಾಮೆ ನೀಡಲು ಮಹಿಳೆಯೊಬ್ಬಳ ದೂರು ಕಾರಣವಾಯಿತು ಎಂಬ ಸತ್ಯ ಹೊರ ಬಂತು.. ಹೌದು ಅಣ್ಣಾಮಲೈ ಅವರು ಕರ್ತವ್ಯದಲ್ಲಿ ಇದ್ದಾಗ.. ಒಬ್ಬ ಮಹಿಳೆ ಒಂದು ದೂರನ್ನು ನೀಡಿದಳಂತೆ.. ಇಲ್ಲಿದೆ ನೋಡಿ ಆ ದೂರು..

” ಸರ್ ನನ್ನ ಗಂಡ ದಿನವೂ ನನ್ನ ಹೊಡಿತಾನೆ.. ದಯವಿಟ್ಟು ಅವನಿಂದ ಕಾಪಾಡಿ ಎಂದು ಕೇಳಿಕೊಂಡಳಂತೆ.. ಆಗ ಗಂಡ.. ಸರ್ ನನಗೆ 300 ರೂ‌. ಸಂಬಳ ಬರತ್ತೆ.. ಅದರಲ್ಲಿ 200 ರೂ. ಖರ್ಚಾಗತ್ತೆ.. 100 ರೂ ಮನೆಗೆ ಕೊಡ್ತೀನಿ.. ಅವಳು ನೂರು ರೂಪಾಯಿ ಸಾಲಲ್ಲ ಅಂತಾ ದಿನಾಲು ಜಗಳ ಆಡ್ತಾಳೆ ಅದಕ್ಕೆ ಹೊಡೀತಿನಿ ಎಂದನಂತೆ..

ಆಗ ಅಣ್ಣಾಮಲೈ ಅವರ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೂಡಿತಂತೆ.. ಇದರಲ್ಲಿ ಯಾರ ತಪ್ಪಿದೆ? ಇವನಿಗೆ ಸಂಬಳ ಕಡಿಮೆ ಬರೋದು ತಪ್ಪಾ.. ಅಥವಾ ಇವನು ಕುಡಿಯೋದು ತಪ್ಪಾ?? ಸಂಬಳ ಹೆಚ್ಚು ಮಾಡಿಕೋ ಅನ್ನಬೇಕಾ‌. ಅಥವಾ ಬೇರೇನು ಮಾಡಲಿ ಎಂದು ಆತನಿಗೆ ಆ ಸಮಯದಲ್ಲಿ ಹೆಂಡತಿಗೆ ಹೊಡೆಯೋದು ತಪ್ಪು ಎಂದು ಅರಿವು ಮೂಡಿಸಿ ಕಳುಹಿಸಿದರಂತೆ.. ಆದರೆ ಆ ಸಂದರ್ಭ ಮಾತ್ರ ಅವರ ಮನಸ್ಸಿನಿಂದ ಹೊರ ಹೋಗಲಿಲ್ಲ..

ಈ ರೀತಿ ಅದೆಷ್ಟೋ ಸಂಸಾರಗಳಿವೆ.. ನನ್ನ ಕೈಲಾದಷ್ಟು ನಾನು ಸೇವೆ ಮಾಡಬೇಕು.. ಅದಕ್ಕಾಗಿ ನಾನು ಈ ಕೆಲಸವನ್ನು ಬಿಟ್ಟು ಬೇರೆ ಏನನ್ನಾದರೂ ಮಾಡಬೇಕು ಎಂದುಕೊಂಡರಂತೆ.. ಅದಕ್ಕಾಗಿಯೇ ಲೋಕಸಭಾ ಚುನಾವಣೆ ಮುಗಿದ ಬಳಿಕ ತಮ್ಮ ರಾಜಿನಾಮೆಯನ್ನು ಘೋಷಿಸಿ.. ಕೆಲ ದಿನಗಳು ಸುಮ್ಮನೆ ಇದ್ದರು..

ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.. ಮುಂದೆ ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಸಮಾಜ ಸುಧಾರಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದಾರೆ..

ಒಂದು ಹುದ್ದೆ ಸಿಕ್ಕರೆ ಸಾಕು ನಮ್ಮ ಸಂಸಾರ ಚೆನ್ನಾಗಿ ಇರುತ್ತದೆ ಎನ್ನುವ ಎಷ್ಟೋ ಜನರ ನಡುವೆ.. ಸಾಮಾಜಿಕ ಕಾರ್ಯಕ್ಕೋಸ್ಕರ ಐಪಿಎಸ್ ಹುದ್ದೆಯನ್ನೇ ಬಿಟ್ಟ ಅಣ್ಣಾಮಲೈ ಅವರು ನಿಜಕ್ಕೂ ಭಿನ್ನವೇ ಸರಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ