ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆನ್ನೆಲುಬಾಗಿ ಮನೆಮಕ್ಕಳಂತೆ ಕೆಲಸ ಮಾಡಿ ಮಂಡ್ಯದ ಜೋಡೆತ್ತುಗಳಲ್ಲಿ ಒಬ್ಬರಾದ ಯಶ್ ಇದೀಗ ಚುನಾವಣೆ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ.
ಹೌದು ಚುನಾವಣೆ ಸಮಯದಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡ ದಿನ ಯಶ್ ಮಂಡ್ಯದಿಂದ ತೆರಳಿದ್ದರು. ಅದಾದ ನಂತರ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ. ಅಭಿಷೇಕ್ ಅವರು ಚುನಾವಣೆಯ ಮರುದಿನವೇ ಮಂಡ್ಯದ ಸರ್ಕಲ್‌ಗೆ ಬಂದು ಸವಾಲಿನಂತೆ ಟೀ ಕುಡಿದಿದ್ದರು.

ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ತಾಲ;ಊಕಿನ ಕೆರೆಮೇಗಳದೊಡ್ಡಿ ಗ್ರಾಮಕೆ ರಾಕಿಂಗ್ ಸ್ಟಾರ್ ಆಗಮಿಸುತ್ತಿದ್ದಾರೆ. ಈ ಮುನ್ನ ಚುನಾವಣೆ ಮುಗಿದ ನಂತರ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎಂದು ಕೆಲ ಪಕ್ಷದ ನಾಯಕರು ಹೇಳುತ್ತಿದ್ದರು. ಆದರೆ ಇದೀಗ ಆ ಮಾತು ಹುಸಿಯಾಗಿದ್ದು, ಅದರಲ್ಲೂ ಹಳ್ಳಿಯೊಂದರಲ್ಲಿ ತಮ್ಮ ಅಭಿಮಾನಿಯ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಯಶ್ ಆಗಮಿಸುತ್ತಿರುವುದು ನಿಜಕ್ಕೂ ಯಶ್ ಅವರ ದೊಡ್ಡಗುಣ ಎನ್ನುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಅವರು, ಇಂದು ಮಧ್ಯಾಹ್ನ ೨ ಗಂಟೆಗೆ ಅಭಿಮಾನಿಯೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ. ಅಷ್ಟೇ ಅಲ್ಲ ಕೆಲವರು ಚುನಾವಣೆ ಮುಗಿದ ನಂತರ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎನ್ನುತ್ತಿದ್ದರು. ಆದರೆ ಅಭಿಮಾನಿಯ ಗೃಹ ಪ್ರವೇಶಕ್ಕೆ ಯಶ್ ಬರುವುದು ಅಷ್ಟೇ ಅಲ್ಲ, ಮುಂದೆ ಮಂಡ್ಯ ಜನರ ಕಷ್ಟ ಸುಖಗಳಿಗೆ ಯಶ್ ಹಾಗೂ ದಶ್ನ್ ಇಬ್ಬರೂ ಸ್ಪಂದಿಸುತ್ತಾರೆ. ಬಿಡುವಿದ್ದಾಗ ಮಂಡ್ಯಗೆ ಬರುತ್ತಾರೆ. ಮಂಡ್ಯ ಜನರ ಜೊತೆ ಇರುತ್ತಾರೆ ಎಂದು ತಿಳಿಸಿದ್ದಾರೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ