ಸ್ಯಾಂಡಲ್ವುಡ್ ಸ್ಟಾರ್ ಗಳು ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ಬ್ಯುಸಿ‌ಆಗುತ್ತಿದ್ದು.. ಇದೀಗ ನಟ ನಟಿಯರ ಮಕ್ಕಳೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಗಳಾಗಿಬಿಟ್ಟಿದ್ದಾರೆ..

ಹೌದು ಮೊನ್ನೆ ಮೊನ್ನೆಯಷ್ಟೇ ಯಶ್ ಹಾಗೂ ಅಜಯ್ ರಾವ್ ಅವರ ಮಕ್ಕಳು ಲಕ್ಷ್ಮಿಯಂತೆ ಅಲಂಕಾರ ಮಾಡಿಸಿಕೊಂಡು ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಮುದ್ದು ಕಂದಮ್ಮಗಳ ಫೋಟೋಗಳು ವೈರಲ್ ಆಗಿದ್ದವು..

ಇದೀಗ ಲೂಸ್ ಮಾದ ಯೋಗೇಶ್ ಅವರು ಮಗಳ ಜೊತೆ ಆಟ ಆಡುವುದರಲ್ಲಿ ಬ್ಯುಸಿಯಾಗಿದ್ದು ಮುದ್ದು ಕಂದನಿಗೆ ದೃಷ್ಟಿ ತೆಗೆಯಿರಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ..

2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯೋಗೇಶ್ ಹಾಗೂ ಸಾಹಿತ್ಯ ದಂಪತಿಗೆ 2019 ಮೇ 24 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗು ಜನನವಾಗಿತ್ತು..

ಇದೀಗ ಮಗುವಿಗೆ ಎರಡು ತಿಂಗಳು ತುಂಬಿದ್ದು, ಮುದ್ದು ಕಂದನೊಂದಿಗೆ ಯೋಗಿ ಅವರು ಫುಲ್ ಬ್ಯುಸಿ ಆಗಿದ್ದಾರೆ.. ಈ ಮುನ್ನ ಮಿಸ್ಟರ್ ಲೂಸ್.. ಮಿಸಸ್ ಲೂಸ್.. ಮಿನಿ ಲೂಸ್ ಎಂಬ ಟೀ ಶರ್ಟ್ ಗಳ ಮೂಲಕ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದರು.. ಇದೀಗ ಮಗಳ ಜೊತೆ ಆಟ ಆಡುತ್ತಿರುವ ಫೋಟೋ ವೈರಲ್ ಆಗಿದ್ದು.. ಮಗಳಿಗೆ ಶ್ರೀನಿಕಾ ಯೋಗೇಶ್ ಎಂಬ ಹೆಸರನ್ನಿಟ್ಟು ಸ್ನೇಹಿತರನ್ನು ಆಶೀರ್ವದಿಸಿ ಎಂದು ಕೋರಿದ್ದಾರೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ