ನೆರೆ ಬಂದು ರಾಜ್ಯದ ಮುಕ್ಕಾಲು ಭಾಗ ತತ್ತರಿಸಿ ಹೋಗಿದೆ.. ಈ ಸಂದರ್ಭದಲ್ಲಿ ಕನ್ನಡಿಗರು ನಾವು ನಮ್ಮ ಅಣ್ಣ ತಮ್ಮಂದಿರ ನೆರವಿಗಾಗಿ ನಿಂತಿದ್ದೇವೆ.. ಹಗಲು ರಾತ್ರಿ ಬಹಳಷ್ಟು ಸಂಘ ಸಂಸ್ಥೆಗಳು.. ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ..

ಕಳೆದ ಬಾರಿ ಹೊರ ರಾಜ್ಯಗಳಲ್ಲಿ ಒರವಾಹವಾದಾಗ ನಾವೆಲ್ಲರೂ ನೆರವಿಗೆ ನಿಂತಿದ್ದೆವು.. ಆದರೆ ಈಗ ಯಾರೂ ಕೂಡ ಕನಿಷ್ಟಪಕ್ಷ ಒಂದು ಟ್ವೀಟ್ ನಲ್ಲಿಯೀ ಕರ್ನಾಟಕದ ಬಗ್ಗೆ ಮಾತನಾಡುತ್ತಿಲ್ಲ.. ಇದೇ ಕಾರಣಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಯುವ ರಾಜ್ ಕುಮಾರ್ ಮಾತಿನಲ್ಲಿಯೇ ಸ್ಟಾರ್ ಗಳಿಗೆ ಸರಿಯಾಗಿಯೇ ಗ್ರಹಚಾರ ಬಿಡಿಸಿದ್ದಾರೆ..

ಹೌದು ಇಲ್ಲಿದೆ ನೋಡಿ ಯುವ ರಾಜ್ ಕುಮಾರ್ ಮಾಡಿರುವ ಟ್ವೀಟ್.. “ಒಂದು ಆಲೋಚನೆ.. ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳ್ಲಲಿ ಜಲಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದಾರೆ .. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ, ಆಹಾರವಿಲ್ಲ, ಮೂಲಭೂತ ಸೌಕರ್ಯಗಳಿಲ್ಲ.. ನಾವು ಕನ್ನಡಿಗರು , ಇಲ್ಲಿನ ಸಂಘ ಸಂಸ್ಥೆಗಳು , ಸೇನೆ ದಳಗಳು , ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ ..

ಆದರೆ, ಎಲ್ಲಾ ಹೊರಗಿನ ಸೆಲೆಬ್ರಿಟಿಗಳು / ಸ್ಟಾರ್‌ಗಳು / ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು, ನಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು , ಮತ ಕೇಳಲು ಕರ್ನಾಟಕಕ್ಕೆ ಬರುವವರು ಎಲ್ಲಿದ್ದಾರೆ? ಇಲ್ಲಿ ಬರೋದು , ಸಹಾಯ ಮಾಡೋದ್ ಇರಲಿ, ನನಗೆ ಯಾರ ಟ್ವೀಟ್ , ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ !

ಅಂದ ಹಾಗೆ , ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಮ್ಮ ಕೋಟಿ ವಂದನೆಗಳು
ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ? ತಪ್ಪಿದರೆ ಕ್ಷಮೆ ಇರಲಿ.. ಯಾರೇ ಬರಲಿ ಬಿಡಲಿ ನಮ್ಮವರ ಜೊತೆ ,ಎಲ್ಲರ ಜೊತೆ ನಾವು ಇರೋಣ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ